ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ್ ರಿಷಬ್ ಪಂತ್ ಆರ್ಥಿಕ ನೆರವು
ಬಾಗಲಕೋಟೆ: ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯಿಂದ ಭಾರತಕ್ಕೆ ಹೆಮ್ಮೆ ತಂದ ಆಟಗಾರ ರಿಷಬ್ ಪಂತ್ ಈ ಬಾರಿಗೆ ಕೇವಲ ಆಟದಲ್ಲಿ ಮಾತ್ರವಲ್ಲ, ಮಾನವೀಯತೆಯಲ್ಲಿಯೂ ಗಮನ ಸೆಳೆದಿದ್ದಾರೆ. ಬಡತನದ ಕಾರಣದಿಂದಾಗಿ ಪದವಿ ಶಿಕ್ಷಣ ಪಡೆಯಲಾಗದೆ ಹಿಂಜರಿಯುತ್ತಿದ್ದ ಬಡ ವಿದ್ಯಾರ್ಥಿನಿಯೊಬ್ಬರಿಗೆ ಅವರು ಸಹಾಯಹಸ್ತ ನೀಡಿರುವುದು ಹೃದಯಸ್ಪರ್ಶಿ ಬೆಳವಣಿಗೆಯಾಗಿದೆ. ಬೀಳಗಿ ತಾಲೂಕಿನ ರಬಕವಿ ಗ್ರಾಮದ ಕು. ಜ್ಯೋತಿ ಕಣಬೂರ ಎಂಬ ವಿದ್ಯಾರ್ಥಿನಿ ಪಿಯುಸಿಯಲ್ಲಿ ಶೇಕಡಾ 83 ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದಾಳೆ. ಉನ್ನತ ಶಿಕ್ಷಣ ಪಡೆಯಬೇಕೆಂಬ ಬಯಕೆ ಇದ್ದರೂ ಆರ್ಥಿಕ ತೊಂದರೆಗಳಿಂದಾಗಿ ಮುಂದಿನ ಓದಿಗೆ







