
ಈದ್ ಮಿಲಾದ್ ಹಬ್ಬ: ಭವ್ಯ ಮೆರವಣಿಗೆ
ಬಾಗಲಕೋಟೆ: ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಬಾಗಲಕೋಟೆ ನವನಗರದಲ್ಲಿ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆ ನಡೆಸಿದರು. ನವನಗರದಲ್ಲಿರುವ ಅಂಜುಮನ್ ಸಂಸ್ಥೆಯ ಆವರಣದಿಂದ ಮೆರವಣಿಗೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಯ್ಯುಬ ಪುಣೇಕರ ಚಾಲನೆ ನೀಡಿದರು. ಮೆರವಣಿಗೆಯು ಕಾಳಿದಾಸ ವೃತ್ತ, ಜಿಲ್ಲಾಸ್ಪತ್ರೆ, ಎಲ್‌ಐಸಿ ವೃತ್ತ, ಅಂಬೇಡ್ಕರ್ ಭವನ ಸೇರಿದಂತೆ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಬಾ ಮಸೀದಿಗೆ ಬಂದು ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವಾದ್ಯ, ಧಾರ್ಮಿಕ ಧ್ವಜಗಳು ಹಾಗೂ ಅಲಂಕೃತ ವಾಹನಗಳು ಆಕರ್ಷಣೆಯಾಗಿದ್ದವು. ವಿವಿಧ ಮಸೀದಿಗಳ ಮಕ್ಕಳು, ಧಾರ್ಮಿಕ




