
Breaking news
ಒಂಟಿಕಾಲಿನಿಂದ ಬದುಕಿಗೆ ನೇಯ್ದ ಕಲ್ಪನೆ – ರಾಜ್ಯ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮಣ ಕಕ್ಕನ್ನವರ
ಬಾಗಲಕೋಟೆ (ಕಮತಗಿ):ಬಡತನ, ಅಂಗವಿಕಲತೆ, ಜೀವನದ ಅನೇಕ ಸವಾಲುಗಳು—ಇವೆಲ್ಲವೂ ನೇಕಾರ ಲಕ್ಷ್ಮಣ ಕಕ್ಕನ್ನವರ ಅವರನ್ನು ತಡೆಯಲಿಲ್ಲ. ಕೇವಲ ಒಂಟಿ ಕಾಲಿನಿಂದ ಸೀರೆ ನೇಯುವ ಅಪೂರ್ವ ಸಾಮರ್ಥ್ಯ ಹೊಂದಿರುವ ಈ ದುಡಿಮೆಯ ಕಲಾವಿದ ಇತ್ತೀಚೆಗೆ ರಾಜ್ಯ ಸರ್ಕಾರದ ನೇಕಾರ ಪ್ರಶಸ್ತಿಗೆ ಆಯ್ಕೆಯಾಗಿ, ಕಮತಗಿ ಪಟ್ಟಣದ ಹೆಮ್ಮೆ ಹೆಚ್ಚಿಸಿದ್ದಾರೆ. ಆಗಸ್ಟ್ 7ರಂದು ಬೆಂಗಳೂರಿನ ಕಬ್ಬನ ಪಾರ್ಕ್‌ನ ನೌಕರರ ಭವನದಲ್ಲಿ ನಡೆಯಲಿರುವ ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯದ ಐವರು ಮಹನೀಯ ನೇಕಾರರೊಂದಿಗೆ ಕಕ್ಕನ್ನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಗೌರವವು ಅವರ ಕಲೆಯ
