ಕ್ಯಾಮೆರಾ ಹಿಂದಿನ ಮಾಂತ್ರಿಕರು ಮೈದಾನದಲ್ಲಿ ಮಿಂಚಿದ ಕ್ಷಣ ಕ್ರಿಕೆಟ್ ಪಂದ್ಯದಲ್ಲಿ ಬಾಗಲಕೋಟೆ ತಾಲೂಕು ತಂಡ ಕ್ಕೆ ಜಯ
ಬಾಗಲಕೋಟೆ : ಅಂತರಾಷ್ಟ್ರೀಯ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ನವನಗರ ಕ್ರೀಡಾಂಗಣದಲ್ಲಿ ಛಾಯಾಗ್ರಹಕರಿಗಾಗಿ ವಿಶೇಷ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ದಿ. ಚಿಟ್ ಚಾಟ್ ಅಶೋಕ್ (ಅಶ್ಫಾಕ್) ಸ್ಮರಣಾರ್ಥವಾಗಿ ಬಾಗಲಕೋಟೆ ಜಿಲ್ಲಾ ಫೋಟೋ ಮತ್ತು ವಿಡಿಯೋ ಗ್ರಾಫರ್‌ಗಳ ಸಂಘದ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗಲಕೋಟೆ ತಾಲೂಕ ತಂಡ ಗೆಲುವಿನ ನಗೆ ಬೀರಿತು. ಸ್ಟೂಡಿಯೋಗಳ ಒಳಗಿರುವ ಪರಿಶ್ರಮದ ಕಲಾವಿದರು, ಈ ಬಾರಿ ಮೈದಾನದಲ್ಲಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಬಾಗಲಕೋಟೆ ತಾಲ್ಲೂಕು