ತಾಯಿಯ ಹಾಲು – ಮಗುವಿಗೆ ಅಮೃತ : ಪ್ರೊ. ಜಯಶ್ರೀ ಇಟ್ಟಿ
ಬಾಗಲಕೋಟೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಸ್ತನ್ಯಪಾನದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಬಾಗಲಕೋಟೆ ತಾಲ್ಲೂಕಿನ ಕೌಲಪೇಟದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ 30ರಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಜಯಶ್ರೀ ಇಟ್ಟಿ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು, “ತಾಯಿಯ ಎದೆ ಹಾಲು ಮಗುವಿಗೆ ಬಹುಮುಖ್ಯ. ಸ್ತನ್ಯಪಾನದಿಂದ ಮಗುವಿಗೆ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಸಂಪೂರ್ಣ ಪೌಷ್ಟಿಕಾಂಶ ದೊರೆಯುತ್ತದೆ. ಈ ಹಾಲು ಮಕ್ಕಳಿಗೆ ಸೈನಿಕ ಶಕ್ತಿಯಂತೆ ರಕ್ಷಣೆ
