
Breaking news
ಗಿರಿಮಠದ ಗಿರಿ : ಧರ್ಮಸಾಮರಸ್ಯದ ಜೀವಂತ ಸಂಕೇತ
ಕಮತಪುರ : ಇತ್ತೀಚಿನ ಸಮಾಜದ ವಾತಾವರಣವನ್ನು ಗಮನಿಸಿದರೆ ಧರ್ಮ–ಜಾತಿ ಹೆಸರಿನಲ್ಲಿ ವಿಭಜನೆ ಉಂಟುಮಾಡುವ ಶಕ್ತಿಗಳು ಹೆಚ್ಚುತ್ತಿವೆ. ರಾಜಕೀಯ ಲಾಭಕ್ಕಾಗಿ ಜನರ ಮನಸ್ಸಿನಲ್ಲಿ ಅನುಮಾನ, ದ್ವೇಷ, ಅಸಹನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾಮರಸ್ಯದ ಬದುಕು ಅಸಾಧ್ಯವೇನೋ ಎಂಬ ಭಾವ ಮೂಡುತ್ತದೆ. ಆದರೆ ಇತಿಹಾಸವನ್ನು ತಿರುಗಿ ನೋಡಿದರೆ ನಮಗೆ ದಾರಿದೀಪವಾಗುವ ಅನೇಕ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಕಮತಪುರದ ಗಿರಿಮಠದ ಗಿರಿ ಒಂದು. ಮಸೀದಿಯು ಭಕ್ತಿಯ ಮಂದಿರವಾದದ್ದು ಮಲಪ್ರಭಾ ನದಿಯ ತಟದಲ್ಲಿ ನಿಂತಿರುವ ಈ ಗಿರಿ ಮೂಲತಃ ಆದಿಲ್