ಉತ್ತಮ ತಂತ್ರಜ್ಞಾನ, ಉತ್ತಮ ವ್ಯಕ್ತಿತ್ವ – ಬಿ.ಇ.ಸಿ.ಯ ಗುರಿ : ಡಾ. ಹೆರಕಲ್

ಬಾಗಲಕೋಟೆ: ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು (ಬಿ.ಇ.ಸಿ) ಬಾಗಲಕೋಟೆ ಜಿಲ್ಲೆಯಲ್ಲಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿಯೇ ತಾಂತ್ರಿಕ ಶಿಕ್ಷಣದಲ್ಲಿ ಶ್ರೇಷ್ಠ ಇತಿಹಾಸವನ್ನು ಹೊಂದಿರುವ ಕಾಲೇಜು. ಉತ್ತಮ ತಂತ್ರಜ್ಞಾನ, ವಿಶ್ವ ಮಟ್ಟದ ವೃತ್ತಿಪರ ಕೌಶಲ್ಯಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಾಗಿದೆ ಎಂದು ಬಿವಿವಿಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಆರ್. ಎನ್. ಹೆರಕಲ್ ಹೇಳಿದರು.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ನೂತನ ಸಭಾಭವನದಲ್ಲಿ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಾಲಕರ ಸಭೆ ಮತ್ತು ಇಂಜಿನಿಯರಿಂಗ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
“ಪಾಲಕರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡು ಮಕ್ಕಳನ್ನು ಎಂಜಿನಿಯರಿಂಗ್ ಪದವಿಗೆ ಸೇರಿಸುತ್ತಾರೆ. ಶಿಕ್ಷಣದಿಂದ ಕೇವಲ ಉದ್ಯೋಗ ಪಡೆಯುವುದು ಗುರಿಯಾಗಬಾರದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ದೇಶಕ್ಕೆ ಶ್ರೇಷ್ಠ ಇಂಜಿನಿಯರ್ ಆಗುವ ಉದ್ದೇಶವನ್ನು ಹೊಂದಿರಬೇಕು” ಎಂದರು. ಕಾಲೇಜಿನ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು, ತಂತ್ರಜ್ಞಾನದ ಪರಿಚಯದೊಂದಿಗೆ ಬಿ.ಇ.ಸಿ ವಿದ್ಯಾರ್ಥಿಗಳು ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಶಿಕ್ಷಣದ ಪ್ರಗತಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ ಮಾತನಾಡಿ, ಯುಜಿ ಮತ್ತು ಪಿಜಿ ಕೋರ್ಸುಗಳು, ಕಾಲೇಜಿನ ಸಾಧನೆಯ ಪಯಣ ಮತ್ತು ಹೆಜ್ಜೆ ಗುರುತುಗಳ ಕುರಿತು ವಿವರಿಸಿದರು. ಡಾ. ಭಾರತಿ ಮೇಟಿ (ಹೆಡ್ – ಬಯೋ ಟೆಕ್ನಾಲಜಿ & ಡೀನ್ ಸ್ಟೂಡೆಂಟ್ ವೆಲ್ಫೇರ್) ಸ್ವಾಗತಿಸಿದರು.
ಡಾ. ಎಸ್.ಆರ್. ಪಾಟೀಲ್ ಕಾರ್ಯಕ್ರಮದ ಸಂಯೋಜಕರಾಗಿ ನೂತನ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು. ಡಾ. ಕೆ. ಚಂದ್ರಶೇಖರ್ (ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ) ಕಾಲೇಜಿನ ವಿವಿಧ ಜವಾಬ್ದಾರಿಯ ಪ್ರಾಧ್ಯಾಪಕರನ್ನು ಸಭೆಗೆ ಪರಿಚಯಿಸಿದರು. ಡಾ. ಪಿ. ಎನ್. ಕುಲಕರ್ಣಿ (ಅಕ್ಯಾಡಮಿಕ್ ಡೀನ್) ಶೈಕ್ಷಣಿಕ ಚಟುವಟಿಕೆಗಳು ಹಾಗೂ ಪ್ಲೇಸ್ಮೆಂಟ್ ಆಯ್ಕೆಗಳ ಕುರಿತು ಮಾತನಾಡಿದರು. ಡಾ. ಮಹಾಬಲೇಶ್ವರ ಎಸ್. (ಡೀನ್ – R&D) ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಪ್ರಯೋಗಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅದರ ವೃತ್ತಿಪರ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಡಾ. ಮಂಜುಳಾ ಸುತಗುಂಡಾರ ನಿರೂಪಿಸಿದರು. ಬಿಇಸಿ ಸ್ವರ ತಂಡ ಪ್ರಾರ್ಥನಾ ಗೀತೆಯನ್ನು ಹಾಡಿತು. ಕೊನೆಗೆ ಇನ್ನೋರ್ವ ಸಂಯೋಜಕರಾದ ಡಾ. ಬಿ. ಜಿ. ಹೊಕ್ರಾಣಿ ವಂದನಾರ್ಪಣೆ ಸಲ್ಲಿಸಿದರು. ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಹಲವಾರು ಪಾಲಕರು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಒಟ್ಟು 2000ಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

यह भी पढ़ें