Uncategorized

Uncategorized

ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ದಯಾನಂದಪುರಿ ಶ್ರೀ ಭೇಟಿ

ಕಮತಗಿ : ಪಟ್ಟಣದ ಪ್ರತಿಷ್ಠಿತ ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಶ್ರೀ ಗಳು ಹಾಗೂ ಧಾರವಾಡ ಕವಲಗೇರಿ ಮಠದ ಶಿವಾನಂದ ಶ್ರೀಗಳು ಇಂದು ಭೇಟಿ‌ ನೀಡಿದರು. ಇದೇ ವೇಳೆ ಆಡಳಿತ ಮಂಡಳಿಯ ಸನ್ಮಾನ ಸ್ವೀಕರಿಸಿ ಮಾತನಾಡಿ ಹಂಪಿದ ಶ್ರೀಗಳು ರಾಜ್ಯದಲ್ಲೇ ನೇಕಾರಿಕೆ ಹೆಚ್ಚು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರಿಗೆ, ಕೂಲಿ ಕಾರ್ಮಿಕರಿಗೆ ಆಸರೆಯಾಗಿರುವ ಪತ್ತಿನ ಸಹಕಾರ ಸಂಘಗಳು, ಸರ್ಕಾರದ ಸೌಲಭ್ಯ ಗಳೊಂದಿಗೆ ಅವರ ಬದುಕು ಕಟ್ಟಿಕೊಡುವಲ್ಲಿ ಪ್ರಮುಖ

Read More »
Uncategorized

ಓಣಂ ಹಬ್ಬ – ನಾಡು, ಭಾಷೆ, ಸಂಸ್ಕೃತಿಗಳ ಸೇತುವೆ

  ಬಾಗಲಕೋಟೆ : ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತಿಕವಾಗಿದ್ದು, ಜನರ ನಡುವೆ ಸೌಹಾರ್ದದ ಭಾವನೆ ಬಲಪಡಿಸುತ್ತವೆ. ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಓಣಂವನ್ನು ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಕಾಲೇಜು ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ಮಾತನಾಡಿ, “ಭಾಷೆ ಬೇರೆ ಇದ್ದರೂ ಹಬ್ಬಗಳು ಜನರನ್ನು ಒಗ್ಗೂಡಿಸುತ್ತವೆ. ಹಬ್ಬಗಳು ನಾಡು, ಭಾಷೆ, ಸಂಸ್ಕೃತಿಗಳ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತವೆ. ಕರ್ನಾಟಕದಲ್ಲಿ ಕೇರಳದ ವಿದ್ಯಾರ್ಥಿಗಳು ಓಣಂ ಹಬ್ಬವನ್ನು

Read More »
Breaking news

ಮಾನವರಹಿತ ತೂಕ ಅಳವಡಿಸಿ ರೈತರಿಗೆ ನ್ಯಾಯ ನೀಡಿ – ಶಾಸಕ ಜೆ.ಟಿ. ಪಾಟೀಲ

    ಬಾಗಲಕೋಟೆ:  ಸಕ್ಕರೆ ಕಾರ್ಖಾನೆಗಳಲ್ಲಿ ಮಾನವರಹಿತ ತೂಕ ಅಳವಡಿಸಿ ರೈತರಿಗೆ ನ್ಯಾಯ ಒದಗಿಸಿದರೆ, ಖುದ್ದಾಗಿ ಬಂದು ನಿಮಗೆ ಸನ್ಮಾನ ಮಾಡುತ್ತೇನೆ” ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು. ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಅವರು,  ಇತ್ತೀಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದರು.  “ನನ್ನ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲಿ. ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಯಾರ ಹತ್ತಿರವೂ ಕಪ್ ಚಹಾ ಸಹ ಕುಡಿದಿಲ್ಲ. ವಿನಾಕಾರಣ ನನ್ನ ತೇಜೋವಧೆ

Read More »

ತಾಯಿಯ ಹಾಲು – ಮಗುವಿಗೆ ಅಮೃತ : ಪ್ರೊ. ಜಯಶ್ರೀ ಇಟ್ಟಿ

ಬಾಗಲಕೋಟೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಸ್ತನ್ಯಪಾನದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಬಾಗಲಕೋಟೆ ತಾಲ್ಲೂಕಿನ ಕೌಲಪೇಟದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ 30ರಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಜಯಶ್ರೀ ಇಟ್ಟಿ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು,  “ತಾಯಿಯ ಎದೆ ಹಾಲು ಮಗುವಿಗೆ ಬಹುಮುಖ್ಯ. ಸ್ತನ್ಯಪಾನದಿಂದ ಮಗುವಿಗೆ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಸಂಪೂರ್ಣ ಪೌಷ್ಟಿಕಾಂಶ ದೊರೆಯುತ್ತದೆ. ಈ ಹಾಲು ಮಕ್ಕಳಿಗೆ ಸೈನಿಕ ಶಕ್ತಿಯಂತೆ ರಕ್ಷಣೆ

Read More »

ಆ.10 ರಿಂದ  ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವ

ಕಮತಗಿ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲಿಯುಗದ ಕಾಮಧೇನು ಶ್ರೀ ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವವು ಇದೇ ಆಗಸ್ಟ 10 ರಿಂದ 12 ರ ವರೆಗೆ  ನಡೆಯಲಿದೆ.  ದಿ. 08 ರಂದು ಸಾಯಂಕಾಲ ಧ್ವಜಾರೋಹಣ. ಗೋಪೂಜೆ. ಧಾನ್ಯ ಪೂಜೆ.  ಆಗಸ್ಟ 09 ರಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದ್ದು. ದಿ. 10 ಪೂರ್ವಾರಾಧನೆ. 11 ರಂದು ಮಧ್ಯಾರಾಧನೆ  12 ರಂದು  ಉತ್ತರಾರಾದನೆ ನಡೆಯಲಿದ್ದು ನಿತ್ಯವು ಬೃಂದಾವನಕ್ಕೆ ಕಾಕಡಾರತಿ. ಪಂಚಾಮೃತ ಅಭಿಷೇಕ.

Read More »

ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಕೂಡ ಕೇಂದ್ರ ಆಯೋಗವೇ ನಡೆಸಲಿ – ನಾಗೇಶ ಎನ್.

ಬಾಗಲಕೋಟೆ: ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೇಂದ್ರ ಚುನಾವಣಾ ಆಯೋಗದ ಮೂಲಕವೇ ನಡೆಸಬೇಕು ಎಂದು  ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ ಎನ್. ಆಗ್ರಹಿಸಿದರು.   ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಲಕಾಲಕ್ಕೆ ತಕ್ಕಂತೆ ಎಲ್ಲ ಚುನಾವಣೆಗಳನ್ನು ಕೇಂದ್ರ ಆಯೋಗವೇ ನಡೆಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾರಿಯಾದರೆ ತಾಲ್ಲೂಕು, ಜಿಲ್ಲಾ ಪಂಚಾಯತ್‌ಗಳಿಗೆ ಕಾಲಮಿತಿಯಲ್ಲಿ ಚುನಾವಣೆ ನಡೆಯುತ್ತದೆ. ವಿಧಾನಸೌಧದತ್ತ ಜನರೇ ಹೋಗುವ ಸ್ಥಿತಿ ಸರಿಯಲ್ಲ ಎಂದ ಅವರು, ರೈತರ ಸಮಸ್ಯೆ ಕೇಳಲು

Read More »

ಒಳಮೀಸಲಾತಿ ವಿಚಾರದಲ್ಲಿ ತರಾತುರಿ ಬೇಡ – ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಬಾಗಲಕೋಟೆ: ಪ್ರಸ್ತುತ ಚರ್ಚೆಯಲ್ಲಿರುವ ಒಳಮೀಸಲಾತಿ ಸಂಬಂಧಿತ ನಿರ್ಧಾರದಲ್ಲಿ ಸರಕಾರ ಯಾವುದೇ ತರಾತುರಿ ತೋರಬಾರದು. ಜನಗಣತಿಯ ಅಂಕಿ ಅಂಶಗಳು ಸಂಪೂರ್ಣವಾಗಿ ನಿಖರವಾಗಿರುವುದು ಅಗತ್ಯ. ಈ ಮೂಲಕ 101 ಪರಿಶಿಷ್ಟ ಜಾತಿಗಳಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ಲೋಪ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಅವರು ಮಾತನಾಡಿದರು. “2011ರ ಕೇಂದ್ರ ಜಾತಿಗಣತಿ ಪ್ರಕಾರ ಶೇಕಡಾ 4.7%ರಷ್ಟು ಭೋವಿ ಸಮುದಾಯದ ಸಂಖ್ಯೆಯು ತೋರಿಸಲಾಗಿದೆ. ಆದರೆ ಅದು ನಿಖರವೋ

Read More »

ಮುಖ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳ ಧರಣಿ: ಜಾತಿ ನಿಂದನೆ ಆರೋಪ

ಬಾಗಲಕೋಟೆ: ನಗರದ ನವನಗರ ಸೆಕ್ಟರ್ ನಂ.43ರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ವಿರುದ್ಧ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಕಾಪಸೆ ಅವರ ವಿರುದ್ಧ ಮೂಲಭೂತ ಸೌಲಭ್ಯಗಳ  ಕಲ್ಪಿಸುವಲ್ಲಿ ವಿಫಲ, ಜಾತಿ ಆಧಾರಿತ ನಿಂದನೆ ಮಾಡುತ್ತಿದ್ದಾರೆಯೆಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ನಂತರ ಅವರು ಮಕ್ಕಳೊಂದಿಗೆ ಮಾತನಾಡಿ ವಿಷಯ ಕುರಿತು ವಿವರ ಪಡೆದಿದ್ದಾರೆ. “ಘಟನೆಯ ಬಗ್ಗೆ

Read More »

ಕ್ಯಾಮೆರಾ ಹಿಂದಿನ ಮಾಂತ್ರಿಕರು ಮೈದಾನದಲ್ಲಿ ಮಿಂಚಿದ ಕ್ಷಣ ಕ್ರಿಕೆಟ್ ಪಂದ್ಯದಲ್ಲಿ ಬಾಗಲಕೋಟೆ ತಾಲೂಕು ತಂಡ ಕ್ಕೆ ಜಯ

ಬಾಗಲಕೋಟೆ : ಅಂತರಾಷ್ಟ್ರೀಯ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ನವನಗರ ಕ್ರೀಡಾಂಗಣದಲ್ಲಿ ಛಾಯಾಗ್ರಹಕರಿಗಾಗಿ ವಿಶೇಷ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ದಿ. ಚಿಟ್ ಚಾಟ್ ಅಶೋಕ್ (ಅಶ್ಫಾಕ್) ಸ್ಮರಣಾರ್ಥವಾಗಿ ಬಾಗಲಕೋಟೆ ಜಿಲ್ಲಾ ಫೋಟೋ ಮತ್ತು ವಿಡಿಯೋ ಗ್ರಾಫರ್‌ಗಳ ಸಂಘದ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗಲಕೋಟೆ ತಾಲೂಕ ತಂಡ ಗೆಲುವಿನ ನಗೆ ಬೀರಿತು. ಸ್ಟೂಡಿಯೋಗಳ ಒಳಗಿರುವ ಪರಿಶ್ರಮದ ಕಲಾವಿದರು, ಈ ಬಾರಿ ಮೈದಾನದಲ್ಲಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಬಾಗಲಕೋಟೆ ತಾಲ್ಲೂಕು

Read More »