ಓಣಂ ಹಬ್ಬ – ನಾಡು, ಭಾಷೆ, ಸಂಸ್ಕೃತಿಗಳ ಸೇತುವೆ

 

ಬಾಗಲಕೋಟೆ : ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತಿಕವಾಗಿದ್ದು, ಜನರ ನಡುವೆ ಸೌಹಾರ್ದದ ಭಾವನೆ ಬಲಪಡಿಸುತ್ತವೆ. ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಓಣಂವನ್ನು ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಕಾಲೇಜು ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ಮಾತನಾಡಿ, “ಭಾಷೆ ಬೇರೆ ಇದ್ದರೂ ಹಬ್ಬಗಳು ಜನರನ್ನು ಒಗ್ಗೂಡಿಸುತ್ತವೆ. ಹಬ್ಬಗಳು ನಾಡು, ಭಾಷೆ, ಸಂಸ್ಕೃತಿಗಳ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತವೆ. ಕರ್ನಾಟಕದಲ್ಲಿ ಕೇರಳದ ವಿದ್ಯಾರ್ಥಿಗಳು ಓಣಂ ಹಬ್ಬವನ್ನು ಆಚರಿಸುವ ಮೂಲಕ ಪರಸ್ಪರ ಸಂಸ್ಕೃತಿಯ ಅರಿವು ಹೆಚ್ಚುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಕೇರಳದ ಚಂಡಮದ್ದಳೆ ತಂಡ, ಬಾಣಸಿಗರ ಪ್ರದರ್ಶನ ಹಾಗೂ ಸ್ಥಬ್ದಚಿತ್ರಗಳು ಗಮನ ಸೆಳೆದವು. ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ ಪ್ರದರ್ಶಿಸಿದರು. ಮಹಾಬಲಿ ವೇಷಧಾರಿಗಳು, ಗಿನ್ನಿಸ್ ದಾಖಲೆ ಪಡೆದ ಕಾವಾಡಿ ದ್ರುವಂ ಕಲಾವಿದರ ತಂಡ ಮತ್ತು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಅದ್ದೂರಿ ಮೆರವಣಿಗೆ ಜರುಗಿತು. ಕಾಲೇಜು ಆವರಣದಲ್ಲಿ ಓಣಂ ಪಾರಂಪರಿಕ ಖಾದ್ಯವಾದ 24 ವಿಧಗಳ ಸವಿ ಊಟ ಸವಿದರು.  ವಿವಿಧ ಆರೋಗ್ಯ ವಿಜ್ಞಾನ ಸಂಸ್ಥೆಗಳ ಬೋಧಕ–ಬೋಧಕೇತರ ಸಿಬ್ಬಂದಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

Leave a Reply

Your email address will not be published. Required fields are marked *

यह भी पढ़ें