ಆ.10 ರಿಂದ  ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವ

ಕಮತಗಿ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲಿಯುಗದ ಕಾಮಧೇನು ಶ್ರೀ ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವವು ಇದೇ ಆಗಸ್ಟ 10 ರಿಂದ 12 ರ ವರೆಗೆ  ನಡೆಯಲಿದೆ.  ದಿ. 08 ರಂದು ಸಾಯಂಕಾಲ ಧ್ವಜಾರೋಹಣ. ಗೋಪೂಜೆ. ಧಾನ್ಯ ಪೂಜೆ.  ಆಗಸ್ಟ 09 ರಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದ್ದು. ದಿ. 10 ಪೂರ್ವಾರಾಧನೆ. 11 ರಂದು ಮಧ್ಯಾರಾಧನೆ  12 ರಂದು  ಉತ್ತರಾರಾದನೆ ನಡೆಯಲಿದ್ದು ನಿತ್ಯವು ಬೃಂದಾವನಕ್ಕೆ ಕಾಕಡಾರತಿ. ಪಂಚಾಮೃತ ಅಭಿಷೇಕ. ವಿಶೇಷ ಪೂಜೆಗಳು ಧಾರ್ಮಿಕ ವಿಧಿ ವಿಧಾನಗಳಂತೆ ಜರುಗುವವು. ಕಾರಣ ಭಕ್ತರು ಈ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ತನು ಮನ ಧನದಿಂದ ಸೇವೆ ಸಲ್ಲಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

यह भी पढ़ें